Saturday, March 5, 2022

Karnataka Raitha Siri Scheme in kannada | Full detail |

ನೈಸರ್ಗಿಕ ದುರಾದೃಷ್ಟಕರ ಅವಘಡಗಳ ರೂಪದಲ್ಲಿ ರೈತರು ತಮ್ಮ ಬೆಳೆಗಳಿಗೆ ನಿರಂತರ ಅಪಾಯವನ್ನು ಎದುರಿಸುತ್ತಾರೆ. ಇದು ಬೆಳೆಗಳ ಉತ್ಪಾದನೆ ಅಥವಾ ಗುಣಮಟ್ಟವನ್ನು ಕುಗ್ಗಿಸುವ ಕಾರಣದಿಂದ ಈ ಸಮಸ್ಯೆಯು ಭಾರೀ ನಿರಾಶೆಯನ್ನು ಉಂಟುಮಾಡುತ್ತದೆ. ಇದರಿಂದ ರೈತರು ಆರ್ಥಿಕವಾಗಿ ಸಂಕಟಕ್ಕೆ ಸಿಲುಕಿಕೊಳುತಾರೆ. ಇಂತಹ ಸಂದರ್ಭಗಳಲ್ಲಿ ರೈತರು ಸಾಲಗಳನ್ನು ಅಥವಾ ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ. ಆದ್ದರಿಂದ ಇಂತಹ ಕಷ್ಟದ ಸಮಯದಲ್ಲಿ ರೈತರಿಗೆ ಸಹಾಯ ಮಾಡಲು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿವಿಧ ಫಲಾನುಭವಿ ಯೋಜನೆಗಳನ್ನು ಪ್ರಾರಂಭಿಸುತ್ತವೆ. ಕರ್ನಾಟಕದ ಸರ್ಕಾರವು ಕೂಡಾ ರೈತರಿಗಾಗಿ 'ರೈತಸಿರಿ' ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆ ಕುರಿತು ಎಲ್ಲಾ ಸಂಬಂಧಿತ ಮಾಹಿತಿಯನ್ನು ಪಡೆಯಲು, ಮುಂದಿನ ಲೇಖನವನ್ನು ಓದಿ.


    ಕರ್ನಾಟಕ ರೈತಸಿರಿ ಯೋಜನೆ ಎಂದರೇನು:-

    2019-20ನೇ ಸಾಲಿನ ಜುಲೈ ತಿಂಗಳಲ್ಲಿ ನಡೆದ ಭಾಷಣದಲ್ಲಿ ಸಿರಿಧಾನ್ಯ ಬೆಳೆಯುವವರಿಗೆ ಉತ್ತೇಜನ ನೀಡಲು "ರೈತಸಿರಿ" ಎಂಬ ಯೋಜನೆಯನ್ನೂ ಪ್ರಂಭಿಸಲಾಯಿತು.
    ಈ ಯೋಜನೆಯು ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್‌ಗೆ 10000/- ರೂಪಾಯಿಯನ್ನು ನೇರವಾಗಿ ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುತ್ತದೆ.
    ಕರ್ನಾಟಕದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿ ಅವರು ತಮ್ಮ ಎರಡನೇ ರಾಜ್ಯ ಬಜೆಟ್ ಅನ್ನು ವಿಧಾನಸಭೆಯಲ್ಲಿ ಮಂಡಿಸಿ. “ಕರ್ನಾಟಕ ರೈತ ಸಿರಿ” ಯೋಜನೆಯನ್ನು ಘೋಷಿಸುವಾಗ ಅವರು ವಿವಿಧ ಕೃಷಿ ಯೋಜನೆಗಳಿಗೆ ಉತ್ತಮ ಮೊತ್ತವನ್ನು ವಿನಿಯೋಗಿಸಿದರು. ಈ ಮೊತ್ತವು ರೈತರ ಎಲ್ಲಾ ಸಮಸ್ಯೆಗಳನ್ನು ಕೊನೆಗೊಳಿಸದಿರಬಹುದು ಆದರೆ ಕಷ್ಟದ ಸಮಯದಲ್ಲಿ ಖಂಡಿತವಾಗಿಯೂ ಅವರಿಗೆ ಸಹಾಯ ಮಾಡುತ್ತದೆ. ಇದು ರೈತರಲ್ಲಿ ಭದ್ರತೆಯ ಭಾವನೆಯನ್ನು ಉಂಟುಮಾಡುತ್ತದೆ.
    ಈ ಯೋನೆಯ ಅನುಷ್ಠಾನಕ್ಕಾಗಿ ರೂ. 10.00 ಕೋಟಿ ಅನುದಾನ ನೀಡುವುದಾಗಿ ಸನ್ಮಾನ್ಯ ಮುಖ್ಯಮಂತ್ರಿಯವರು ಹೇಳಿದಾರೆ.


    ರೈತ ಸಿರಿ ಯೋಜನೆಯ ಮುಖ್ಯಾಂಶಗಳು:-

    ಯೋಜನೆ ಯೋಜನೆಬಗ್ಗೆ
    ಯೋಜನೆಯ ಹೆಸರು ಕರ್ನಾಟಕ ರೈತ ಸಿರಿ ಯೋಜನೆ
    ಯೋಜನೆಯ ಪ್ರಾರಂಭ ಜುಲೈ 2019-2020
    ಪ್ರಾರಂಭಿಸಿದವರು ಎಚ್‌ಡಿ ಕುಮಾರಸ್ವಾಮಿ
    ಯೋಜನೆಯ ಉದ್ದೇಶ ಪ್ರತೀ ಹೆಕ್ಟರ್ ಗೆ 10000
    ರೂಪಾಯಿ ನೀಡುವುದು
    ಯೋಜನೆಯ ವಿಭಾಗ  ಕೃಷಿ ವಿಭಾಗದ ಯೋಜನೆ
    ಫಲಾನುಭವಿಗಳು ಯಾರು ಕರ್ನಾಟಕದ ಸಿರಿಧಾನ್ಯ
    ಬೆಳೆಯುವ ರೈತರು
    ಅರ್ಜಿ ಸಲ್ಲಿಸುವುದು ಹೇಗೆನಿಮ್ಮ ನಿಮ್ಮ ಹತ್ತಿರದ ಕೃಷಿ
    ವಿಭಾಗಕ್ಕೆ ಬೇಟಿ ನೀಡಿ
    ಅಧಿಕೃತ ವೆಬ್ಸೈಟ್ https://raitamitra.karnataka.gov.in/

    ರೈತಸಿರಿ ಯೋಜನೆಯ ಉದ್ದೇಶ:-

    ಈ ಯೋಜನೆಯ ಮುಖ್ಯ ಉದ್ದೇಶವೆಂದರೆ:
    • ರಾಜ್ಯದಲ್ಲಿ ಸಿರಿಧಾನ್ಯಗಳ ಉತ್ಪಾದನೆಯನ್ನು ಹೆಚಿಸುವುದು ಮತ್ತು ಅವುಗಳ ಉತ್ಪಾದನಾ ಪ್ರದೇಶವನ್ನು ಹೆಚಿಸುವುದು.
    • ಅತಿ ಕಡಿಮೆ ಮಳೆ ಬಿಳುವ ಪ್ರದೇಶಗಳಲ್ಲಿ ಮತ್ತು ಕಡಿಮೆ ಫಲವತತೆ ನೀಡುವ ಭೂಮಿಗಳನ್ನು ಸದುಪಯೋಗ ಪಡೆದುಕೊಳ್ಳುವಂತೆ ಮಾಡುವುದು.
    • ರಾಜ್ಯದ ಕೃಷಿ ಕಾರ್ಮಿಕರಿಗೆ ಮತ್ತು ರೈತರಿಗೆ ಆರ್ಥಿಕ ನೆರವು ನೀಡುವುದು.
    • ರಾಗಿ ಬೆಳೆಗಾರರಿಗೆ ಪ್ರತಿ ಹೆಕ್ಟೇರಿಗೆ ಒಟ್ಟು 10,000 ರೂಪಾಯಿಯನ್ನು ನೀಡುವುದು.
    • ಈ ಯೋಜನೆಯಡಿ ಸಿರಿಧಾನ್ಯಗಳನ್ನು ಬೆಳೆಸಲು ಪ್ರೋತ್ಸಾಹಿಸುವುದು.

    ರೈತಸಿರಿ ಯೋಜನೆಯ ಅರ್ಹತೆ (Eligibility):-

    • ಫಲಾನುಭವಿಗಳು ಕರ್ನಾಟಕ ರಾಜ್ಯದ ರೈತರಾಗಿದ್ದು ಭೂಮಿಯು ಅವರ ಹೆಸರಿನಲ್ಲಿರಬೇಕು.
    • ಜಂಟಿ ಖತೆಯಾಗಿದ್ದಲ್ಲಿ ಇತರೆ ಖಾತೆದಾರರ ಒಪ್ಪಿಗೆ ಪತ್ರ ಪಡೆದಿರಬೇಕು.
    • ತಂದೆ ಅಥವಾ ತಾಯಿಯ ಹೆಸರಿನಲ್ಲಿ ಭೂಮಿಯನ್ನು ಹೊಂದ್ದಿದು ಅವರು ಮರಣ ಹೊಂದ ಸಂದರ್ಭದಲ್ಲಿ ಮನೆಯ ಎಲ್ಲಾ ಸದಸ್ಯರ ಅನುಮತಿ ಪಡೆದು ಅರ್ಜಿಯನ್ನು ಸಲಿಸಬೇಕು.
    • ಫಲಾನುಭವಿಗಳು ಸಿರಿಧಾನ್ಯಗಳಾದ ಕೊರಲೆ, ಸಾಮೆ, ಹಾರಕಾ, ನವಣೆ, ಊದಲು ಮತ್ತು ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಪ್ರಮುಖ ಬೆಳೆಯಾಗಿ ಬೆಳೆದಿರಬೇಕು.
    • ಮಹಿಳೆಯರ ಹೆಸರಿನಲ್ಲಿ ಖಾತೆ ಹೊಂದಲ್ಲಿ ಮಹಿಳೆಯರ ಹೆಸರಿನಲ್ಲಿ ಅರ್ಜಿ ಸಲ್ಲಿಸಬೇಕು.

    ಕರ್ನಾಟಕ ರೈತ ಸಿರಿ ಯೋಜನೆಯ ಲಾಭಗಳು:-

    • ರೈತ ಸಿರಿ ಯೋಜನೆಯು ಕರ್ನಾಟಕದಲ್ಲಿ ಕೃಷಿ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತದೆ.
    • ಇದು ಸಿರಿಧಾನ್ಯಗಳ ಬೇಸಾಯವನ್ನು ಬೆಳೆಯಲು ಪ್ರೋತ್ಸಾಹಿಸುತ್ತದೆ.
    • ಇದು ಪ್ರತಿ ಹೆಕ್ಟೇರ್‌ಗೆ 10,000 ರೂ. ಗಳ ಆರ್ಥಿಕ ನೆರವು ನೀಡುತ್ತದೆ.
    • ನೇರ ಲಾಭ ವರ್ಗಾವಣೆ (ಡಿಬಿಟಿ) ವಿಧಾನದ ಮೂಲಕ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ಮೊತ್ತವನ್ನು ಕಳುಹಿಸಲಾಗುತ್ತದೆ.

    ಯೋಜನೆಗೆ ಅಗತ್ಯವಿರುವ ದಾಖಲೆಗಳು:-

    • ಆಧಾರ್ ಕಾರ್ಡ್(Aadhar card)
    • ಭೂಮಿಗೆ ಸಂಬಂಧಿಸಿದ ದಾಖಲೆಗಳು
    • ಆದಾಯ ಪ್ರಮಾಣಪತ್ರ 
    • ಜಾತಿ ಪ್ರಮಾಣ ಪತ್ರ
    • ವಿಳಾಸ ಪುರಾವೆ
    • ಪಡಿತರ ಚೀಟಿ(Ration Card)
    • ಬ್ಯಾಂಕ್ ಖಾತೆ ಪಾಸ್‌ಬುಕ್
    • ಮೊಬೈಲ್ ನಂಬರ(mobile no)

    ರೈತಸಿರಿ ಯೋಜನೆ ರೈತರಿಗೆ ಪ್ರೋತ್ಸಾಹ ಧನ ನೀಡುವ ವಿಧಾನ:-

    ಸಿರಿಧಾನ್ಯ ಬೆಳೆಯುವ ರೈತರಿಗೆ ಪ್ರತಿ ಹೆಕ್ಟೇರ್ಗೆ 10 ಸಾವಿರ ಪ್ರೋತ್ಸಾಹಧನವನ್ನು 2 ಕಂತುಗಳಲ್ಲಿ ನೀಡುವುದು.
    • ಊದಲು, ನವಣೆ, ಬರಗು ಇತ್ಯಾದಿ ಸಿರಿಧಾನ್ಯಗಳನ್ನು ಬೆಳೆಯುವ ರೈತರಿಗೆ ಮೊದಲ ಕಂತಿನಲ್ಲಿ ಬೆಳೆ ಬಿತ್ತನೆ ಮಾಡಿದ 30 ದಿನಗಳ ನಂತರ ರೂ 6000/- ಪ್ರೋತ್ಸಾಹಧನವನ್ನು ರೈತರ ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.
    • ಎರಡನೇ ಕಂತಿನಲ್ಲಿ ರೂ 4000/- ಪ್ರೋತ್ಸಾಹಧನವನ್ನು ರೈತರ ಬ್ಯಾಂಕ ಖಾತೆಗೆ ನೇರವಾಗಿ ಜಮೆ ಮಾಡುವುದು.
    Read Also:-

    ರೈತಸಿರಿ ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ:-

    • ಈ ಯೋಜನೆಯ ಲಾಭವನ್ನು ಪಡೆಯಲು ಬಯಸಿದ ರೈತರು ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಿಲ್ಲಿ ತಮ್ಮ ಹೆಸರನ್ನು ನೋಂದಾಯಿಸಿ ಕೊಳ್ಳಬೇಕು. 
    • ರೈತ ಸಂಪರ್ಕ ಕೇಂದ್ರದ ಅಧಿಕಾರಿಯನ್ನು ಬೇಟಿನೀಡಿ ದಾಖಲೆಗಳನ್ನು ಅನ್ವಯಿಸುವುದು.
    • ಹೆಚ್ಚಿನ ಮಾಹಿತಿಗಾಗಿ ರೈತರು ನಿಮ್ಮ ನಿಮ್ಮ ರೈತ ಸಂಪರ್ಕ ಕೇಂದ್ರಗಳಿಗೆ ಮತ್ತು ತಾಲ್ಲೂಕು ಕೃಷಿ ಸಹಾಯಕ ಕೇಂದ್ರಕ್ಕೆ ಬೇಟಿನೀಡಬೇಕು.

    Important Links:-

    "ರೈತಸಿರಿ" ಯೋಜನೆಯ FAQ's:-

    Q: ಈ ಯೋಜನೆಯು ಯಾವಾಗ ಪ್ರಾರಂಭ  ವಾಯಿತು?
    Ans: ಈ ಯೋಜನೆಯು ಜುಲೈ 2019-2020 ನೇ ಸಾಲಿನಲ್ಲಿ ಪ್ರಾರಂಭವಾಯಿತು.

    Q: ಈ ಯೋಜನೆಯ ಲಾಭ ಪಡೆಯಲು ಹೇಗೆ ಅರ್ಜಿಯನ್ನು ಸಲ್ಲಿಸಬೇಕು?
    Ans: ನಾವು ಮೇಲೆ ಬರೆದ ಆರ್ಟಿಕಲ್ ನಲ್ಲಿ ಹೇಳಿದಂತೆ ನೀವು ನಿಮ್ಮ ಸಮೀಪದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಬೇಕು.

    Q: ಈ ಯೋಜನೆಗೆ ಯಾರು ಅರ್ಹರು?
    Ans: ಕರ್ನಾಟಕದಲ್ಲಿ ಸಿರಿಧಾನ್ಯ ಬೆಳೆಯುವ ರೈತರು ಈ ಯೋಜನೆಗೆ ಅರ್ಹರು.

    Q: ಭೂಮಿಯು ತಂದೆಯವರ ಹೇಸರಿನಲ್ಲಿದು ಅವರು ಮರಣ ಹೊಂದ ಸಂಧರ್ಭದಲ್ಲಿ ಏನು ಮಾಡಬೇಕು?
    Ans: ತಂದೆ ಅಥವಾ ತಾಯಿಯ ಹೆಸರಿನಲ್ಲಿ ಭೂಮಿಯನ್ನು ಹೊಂದ್ದಿದು ಅವರು ಮರಣ ಹೊಂದ ಸಂದರ್ಭದಲ್ಲಿ ಮನೆಯ ಎಲ್ಲಾ ಸದಸ್ಯರ ಅನುಮತಿ ಪಡೆದು ಅರ್ಜಿಯನ್ನು ಸಲಿಸಬೇಕು.

    Q: ಈ ಯೋಜನೆಗೆ ಅರ್ಜಿ ಸಲ್ಲಿಸುವ ಕೊನೆಯ ದಿನಾಂಕ ಯಾವುದು?
    Ans: ಈ ಯೋಜನೆಯ ಕೊನೆಯ ದಿನಾಂಕವನ್ನು ನೋಡಬೇಕಾದರೆ ಅಧಿಕೃತ websiteಗೆ ಭೇಟಿ ನೀಡಿ.

    0 comments

    Post a Comment

    please do not enter any spam link in the comment box.