Saturday, February 19, 2022

Krishi Bhagya Scheme karnataka in kannada | full detail |

ಕರ್ನಾಟಕವು ಒಂದು ಕೃಷಿ ಪ್ರಧಾನ ರಾಜ್ಯವೆಂದು ನಿಮಗೆ ಗೊತ್ತು. ಕರ್ನಾಟಕ ಸರ್ಕಾರವು ತಮ್ಮ ಕೃಷಿಗಾಗಿ ವಾರ್ಷಿಕ ಮಳೆಯನ್ನೇ ಅವಲಂಬಿಸಿರುವ ಒಣಭೂಮಿ ರೈತರಿಗಾಗಿ ಪ್ರತ್ಯೇಕವಾಗಿ ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಿದೆ. ಕರ್ನಾಟಕದಲ್ಲಿ ಶೇಕಡಾ 68 ಕ್ಕಿಂತ ಹೆಚ್ಚು ರೈತರು ಮಳೆಯ ಆಧಾರಿತರಾಗಿರುವುದರಿಂದ, ಆ ಒಣ ಭೂಮಿಯಲ್ಲಿ ಕೃಷಿ ಚಟುವಟಿಕೆಗಳು ನಡೆಸಲು ತೊಂದರೆ ಯಾಗುತ್ತಿರುವುದರಿಂದ  ಸುಸ್ಥಿರ ಕೃಷಿಗೆ ನೀರಾವರಿಯನ್ನು ಖಚಿತಪಡಿಸಿಕೊಳ್ಳಲು, ಕೃಷಿ ಭಾಗ್ಯ ಯೋಜನೆಯನ್ನು ಪ್ರಾರಂಭಿಸಲಾಯಿತು.

    ಕೃಷಿ ಭಾಗ್ಯ ಯೋಜನೆ ಎಂದರೇನು ತಿಳಿಯೋಣ:-

    ಕರ್ನಾಟಕವು ಒಂದು ಕೃಷಿ ಪ್ರಧಾನ ರಾಜ್ಯವಾಗಿದ್ದು, ಇಲ್ಲಿ ಸುಮಾರು 68 ಶೇ. ರಷ್ಟು ಪ್ರದೇಶವು ಮಳೆಯಾಶ್ರಿತ ಪ್ರದೇಶವಾಗಿವೆ. 58 ಶೇಕಡಾ ರಷ್ಟು ಆಹಾರ ಧಾನ್ಯಗಳು ಮತ್ತು ಶೇಕಡಾ 75 ರಷ್ಟು ಎಣ್ಣೆಕಾಲುಗಳ ಉತ್ಪಾದನೆಯು ಈ ಮಳೆಯಾಶ್ರಿತ ಪರದೇಶಗಳಿಂದಲೆ ಯಾಗುತದೆ. ಇನ್ನು ಮಳೆಯ ಮೇಲೆ ಅವಲಂಬಿತರಾಗಿರುವ ರೈತರು ಕೊಳವೆ ಬಾವಿಗಳನ್ನು ಕೊರೆಯುತಾರೆ. ಕೊಳವೆ ಬಾವಿಗಳು ವಿಫಲವಾದರೆ ಅಥವಾ ಕೆಲವು ವರ್ಷಗಳ ನಂತರ ಕೊಲವೆಬಾವಿ ಬತ್ತುಹೋದ ಸಂಧರ್ಬದಲ್ಲಿ ರೈತರು ಸಾಲಗಾರರಾಗಿ ಸಿಲುಕಿಕೊಳುತ್ತಾರೆ. ಆದ್ದರಿಂದ ರೈತರು ಈ ಯೋಜನೆಯಡಿಯಲ್ಲಿ ಕೊಳವೆ ಬಾವಿಯ ಬದಲು ಕೃಷಿ ಹೋಂಡಾ ನಿರ್ಮಿಸ ಬಹುದು.
    ಕೃಷಿ ಭಾಗ್ಯ ಯೋಜನೆ 2014-2015 ನೇ ಸಾಲಿನಲ್ಲಿ ಮಳೆಯಾಶ್ರಿತ ಪ್ರದೇಶದಲ್ಲಿರುವ ರೈತರ ಪರಿಸ್ಥಿತಿ ಉತ್ತಮಪಡಿಸಲು ಪ್ರಾಂಭಿಸಲಾಗಿದೆ.
    ಕೃಷಿ ಭಾಗ್ಯ ಯೋಜನೆಯಿಂದ ಕಳೆದ ಮೂರು ವರ್ಷಗಳಲ್ಲಿ 25 ಜಿಲ್ಲೆಗಳ 131 ತಾಲೂಕುಗಳ ಮಳೆಯಾಶ್ರಿತ ಪ್ರದೇಶಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಪ್ರಯೋಜನ ಪಡೆದಿದ್ದಾರೆ.
    ಮಳೆಯಾಶ್ರಿತ ಪ್ರದೇಶಗಳಲ್ಲಿನ ಒಂದು ಲಕ್ಷಕ್ಕೂ ಹೆಚ್ಚು ರೈತರಿಗೆ ಸಹಾಯ ಮಾಡಲು ಕರ್ನಾಟಕ  ಸರ್ಕಾರ Rs 968.37 ಕೋಟಿ ಆರ್ಥಿಕ ನೆರವು ನೀಡಿದೆ. ಕೃಷಿ ಭಾಗ್ಯ ಯೋಜನೆಯಡಿ, ರೈತರು ತಮ್ಮ ಕೃಷಿ ಭೂಮಿಯಲ್ಲಿ ಕೃಷಿ ಹೊಂಡಗಳನ್ನು ನಿರ್ಮಿಸುವುದು ಮತ್ತು ಬೆಳೆದಿರುವ ಬೆಳೆಗಳನ್ನು ರಕ್ಷಿಸಲು ಮಳೆಗಾಲದ ಸಮಯದಲ್ಲಿ ಬಳಸಲು ಪ್ರತಿ ಹನಿ ಮಳೆನೀರನ್ನು ಉಳಿಸುವಂತಹ ಜಲ ಸಂರಕ್ಷಣೆ ಕ್ರಮಗಳನ್ನು ಕೈಗೊಳ್ಳಲು ಸಹಾಯ ಮಾಡಲು ಒತ್ತು ನೀಡಲಾಗುತ್ತದೆ.



    ಕೃಷಿ ಭಾಗ್ಯ ಯೋಜನೆಯ ಉದ್ದೇಶ:-

    ಈ ಯೋಜನೆ ಉದ್ದೇಶವೆಂದರೆ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸುವುದು  ಮತ್ತು ಮಳೆಗಾಲದಲ್ಲಿ ಮಳೆ ನೀರನ್ನು ಸಂಗ್ರಹಿಸಿ ಅಗತ್ಯವಿದ್ದಾಗ ಆ ನೀರನ್ನು ಬಳಸಿ ಬೆಳೆಯನ್ನು ಉಳಿಸುವುದು . ಮತ್ತೆ ರೈತರ ಆದಾಯ ವನ್ನು ಹೆಚ್ಚಿಸಬಹುದು.

    ಕೃಷಿ ಭಾಗ್ಯ ಯೋಜನೆಯ ಲಾಭಗಳು:-

    1. ಮಳೆ ನೀರನ್ನು ಸಂಗ್ರಹಿಸಲು ಕೃಷಿ ಹೊಂಡವನ್ನು ನಿರ್ಮಿಸುವುದು.
    2. ನೀರನ್ನು ಬತ್ತು ಹೋಗದಂತೆ ಪ್ಲಾಸ್ಟಿಕ್ ಹೊದಿಕೆಯನ್ನು ಹೊದಿಸುವುದು.
    3. ಕೃಷಿ ಹೊಂಡದಿಂದ ನೀರನ್ನು ಮೇಲೆ ಏತಲ್ಲೂ ಡೀಸೆಲ್ ಪಂಪ್ ಸೆಟ್ ಅನ್ನು ಒದಗಿಸಲಾಗುತ್ತದೆ. 
    4. ನೀರನ್ನು ಬೆಳೆಗೆ ಹಾಯಿಸಲು ಹನಿ ಅಥವಾ ತುಂತುರು ನೀರಾವರಿ ಒದಗಿಸುತ್ತದೆ.
    5. ಕೃಷಿ ಹೊಂಡದ ಸುತ್ತ ನೆರಳು ನೀಡುತ್ತದೆ.(shade net )

    ಕೃಷಿ ಭಾಗ್ಯ ಯೋಜನೆ ಅರ್ಹತಾ ಮಾನದಂಡಗಳು(Eligibility):-

    • ದಕ್ಷಿಣ ಕನ್ನಡದ ಕೃಷಿ ಇಲಾಖೆಯ ಪ್ರಕಾರ, 1-ಎಕರೆ ಮತ್ತು ಅದಕ್ಕಿಂತ ಹೆಚ್ಚಿನ ಜಮೀನು ಹೊಂದಿರುವ ರೈತರು ಯೋಜನೆಯ ಲಾಭವನ್ನು ಪಡೆಯಲು ಅನ್ವಯಿಸಬಹುದು.
    • ಕಳೆದ ಮೂರು ವರ್ಷಗಳಲ್ಲಿ ಪಂಪ್ ಸೆಟ್ ಮತ್ತು ಹನಿ ನೀರಾವರಿ ವ್ಯವಸ್ಥೆಗೆ ಸಬ್ಸಿಡಿ ಪಡೆದಿರುವ ರೈತರು ಈಗ ಅವರಿಗೆ ನಿಧಿಗೆ ಅರ್ಹರಲ್ಲ. ಆದಾಗ್ಯೂ, ಕೃಷಿ ಹೊಂಡಗಳಿಗೆ ಹಣವನ್ನು ಪಡೆಯಬಹುದು. 

    ಕೃಷಿ ಹೊಂಡ ನಿರ್ಮಾಣ:-

    ಕೃಷಿ ಹೊಂಡ ನಿರ್ಮಿಸಲು 3 ರೀತಿ ಅವಕಾಶಗಳನ್ನು ನೀಡಲಾಗುತ್ತದೆ-
    • ರೈತರು ಸ್ವಂತ ಕೃಷಿ ಹೊಂಡವನ್ನು ನಿರ್ಮಿಸಿಕೊಳ್ಳಬಹುದು. ಸಂಪೂರ್ಣ ಸಹಾಯಧನವನ್ನು ರೈತರ  ಖಾತೆಗೆ ವರ್ಗಾಯಿಸಲಾಗುವುದು.
    • ಜೆ. ಸಿ. ಬಿ ಮೂಲಕ ಕೃಷಿ ಹೊಂಡ ನಿರ್ಮಿಸುವುದು. ರೈತರು ಆಯ್ಕೆ ಮಾಡಿರುವ ಜೆಸಿಬಿ ಮಾಲೀಕರ ಮೂಲಕ ಕೃಷಿ ಹೊಂಡ ನಿರ್ಮಿಸಿದಲ್ಲಿ. ಸ್ಥಳೀಯ ಅಧಿಕಾರಿಗಳ ತಪಾಸಣೆ ನಂತರ ಜೆಸಿಬಿ ಮಾಲೀಕರಿಗೆ ಸಹಾಯಧನವನ್ನು   ವರ್ಗಾಯಿಸಲಾಗುವುದು .
    • ಕೃಷಿ ಹೊಂಡವನ್ನು ಅನುಮೋದಿತ ಸಂಸ್ಥೆ ಗಳಿಂದ ನಿರ್ಮಿಸುವುದು. ರೈತರು ಆಯ್ಕೆ ಮಾಡಿರುವ ಸಂಸ್ಥೆಗಳು ಹೊಂಡವನ್ನು ನಿರ್ಮಿಸಿದಾಗ ಸ್ಥಳೀಯ ಅಧಿಕಾರಿಗಳು ತಪಾಸನೆ ಮಾಡಿದ ನಂತರ ಸಂಸ್ಥೆಗಳಿಗೆ ಸಹಾಯಧನವನ್ನು  ವರ್ಗಾಯಿಸಲಾಗುವುದು.

    ಕೃಷಿ ಭಾಗ್ಯ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬೇಕು(Apply):-

    ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು ಅಥವಾ ಕರ್ನಾಟಕದ ತಾಲೂಕು/ಜಿಲ್ಲೆಗಳಿಗೆ ಸಂಬಂಧಿಸಿದ ಕೃಷಿ ಇಲಾಖೆಗಳಿಗೆ ಭೇಟಿ ನೀಡಬೇಕು.

    Read Also:-

    Important Links:-

    ಕೃಷಿ ಭಾಗ್ಯ ಯೋಜನೆ FAQ's:-

    • ಈ ಯೋಜನೆ ಪ್ರಾರಂಭಿಸಿದ ವರ್ಷ ಯಾವುದು?
    2014-2015 ನೇ ಸಾಲಿನಲ್ಲಿ ಈ ಯೋಜನೆಯನ್ನು ಪ್ರಾರಂಭಿಸಲಾಯಿತು.
    • ಈ ಯೋಜನೆಗೆ ಅಗತ್ಯವಿರುವ ದಾಖಲೆಗಳು ಯಾವುವು?
    ಯೋಜನೆಯ ದಾಖಲೆಗಳ ಬಗ್ಗೆ ಮಾಹಿತಿ ಬೇಕಾದರೆ ಸ್ಥಳೀಯ ಕೃಷಿ ಇಲಾಖೆಗೆ ಭೇಟಿ ನೀಡಬೇಕು.
    • ಈ ಯೋಜನೆಯ ಗುರಿ ಏನು?
    ಈ ಯೋಜನೆ ಉದ್ದೇಶವೆಂದರೆ ರಾಜ್ಯದ ಎಲ್ಲಾ ರೈತರು ಈ ಯೋಜನೆಯ ಅಡಿಯಲ್ಲಿ ಕೃಷಿ ಹೊಂಡವನ್ನು ನಿರ್ಮಿಸುವುದು.
    • ಈ ಯೋಜನೆಗೆ ಹೇಗೆ ಅರ್ಜಿ ಸಲ್ಲಿಸಬಹುದು?
    ಈ ಯೋಜನೆಯ ಲಾಭ ಪಡೆಯಲು ಇಚ್ಛಿಸುವ ರೈತರು ಇಲಾಖೆ ಅಥವಾ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಬೇಕು.

    1 comments:

    please do not enter any spam link in the comment box.