Saturday, June 1, 2024

Live Coverage: Lok Sabha Election Results 2024: In-Depth Analysis, Trends, and Winning Margins

2024 Lok Sabha Election Results Live Updates: Real-Time Election Results and Constituency-Wise Analysis!Stay informed with live coverage of the 2024 Lok Sabha Election Results. Dive into in-depth analysis, trends, and winning margins. Your go-to resource for election insights.”

ಲೋಕಸಭೆ ಚುನಾವಣೆ ಫಲಿತಾಂಶ 2024 LIVE Updates | General Election to Parliamentary Constituencies: Trends & Results June-2024

Karnataka (Total PC - 28)

For real-time updates on the 2024 Lok Sabha elections, visit the official Election Commission of India (ECI) website. Feel free to explore the ECI website for the latest election information! 😊  (ಮತ್ತಷ್ಟು ಮಾಹಿತಿ ಈ ಕೆಳಗಿನಂತಿದೆ.👇👇)

Live Coverage: Lok Sabha Election Results 2024: In-Depth Analysis, Trends, and Winning Margins
Live Coverage: Lok Sabha Election Results 2024: In-Depth Analysis, Trends, and Winning Margins

To check the live updates for the 2024 Lok Sabha Election Results, you can visit the official website of the Election Commission of India (ECI). Here’s how you can do it: 

CLICK HERE TO WATCH RESULT IN ELECTION COMMISSION WEBSITE (Click on parliamentary constituencies 543)

Live Coverage: Lok Sabha Election Results 2024: In-Depth Analysis, Trends, and Winning Margins! General Election to Parliamentary/Assembly Constituencies: Trends & Results June-2024

Election Results 2024 Live Updates: Link

To check the live updates for the 2024 Lok Sabha Election Results, you can visit the official website of the Election Commission of India (ECI). Here’s how you can do it:

CLICK HERE TO WATCH RESULT IN ELECTION COMMISSION WEBSITE

CLICK FOR OFFICIAL WEBSITE

CLICK HERE TO WATCH RESULT IN ELECTION COMMISSION WEBSITE


BREAKING: ಖರ್ಗೆ ಅಳಿಯನಿಗೆ ಭರ್ಜರಿ ಗೆಲುವು!

ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿರುವ AICC ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರ ಅಳಿಯ ರಾಧಾಕೃಷ್ಣ ದೊಡ್ಡಮನಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಡಾ.ಉಮೇಶ್ ಜಾಧವ್ ಅವರನ್ನು ಸೋಲಿಸುವ ಮೂಲಕ ಖರ್ಗೆ ಅವರ ಸೇಡು ತೀರಿಸಿಕೊಂಡಿದ್ದಾರೆ. ಕಳೆದ ಬಾರಿ ಮಲ್ಲಿಕಾರ್ಜುನ್ ಖರ್ಗೆ, ಜಾಧವ್ ವಿರುದ್ಧ ಸೋತಿದ್ದರು. ಇದೀಗ ಅವರ ಅಳಿಯ ಗೆದ್ದು ಬೀಗಿದ್ದಾರೆ.

BREAKING: ತೇಜಸ್ವಿ ಸೂರ್ಯಗೆ ಜಯ!

ಬೆಂಗಳೂರು(ದಕ್ಷಿಣ) ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ  ಅವರು ದಾಖಲೆಯ ಮತಗಳ ಅಂತರದಿಂದ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾಗಿರುವ ಮಾಜಿ ಶಾಸಕಿ ಸೌಮ್ಯ ರೆಡ್ಡಿ ಅವರನ್ನು ಹೀನಾಯವಾಗಿ ಸೋಲಿಸಿದ್ದಾರೆ. ಈ ಮೂಲಕ ತೇಜಸ್ವಿ ಸೂರ್ಯ ಸಂಸತ್ ಗೆ ಮತ್ತೊಮ್ಮೆ ಪ್ರವೇಶ ಪಡೆಯಲಿದ್ದಾರೆ.

Live Coverage: Lok Sabha Election Results 2024: In-Depth Analysis, Trends, and Winning Margins
Keep an eye on the website for real-time updates as the results are announced! 🗳️🇮🇳

BREAKING: ದಾವಣಗೆರೆಯಲ್ಲಿ ಕಾಂಗ್ರೆಸ್ ಗೆಲುವು!

ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಭರ್ಜರಿಯಾಗಿ ಗೆಲುವು ದಾಖಲಿಸಿದ್ದಾರೆ. ಅವರು ಹಾಲಿ ಸಂಸದ ಸಿದ್ದೇಶ್ವರ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ ಅವರ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

BREAKING: ಡಿಕೆ ಸುರೇಶ್ ಗೆ ಹೀನಾಯ ಸೋಲು

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿಕೆ ಸುರೇಶ್ ಹೀನಾಯ ಸೋಲು ಕಂಡಿದ್ದಾರೆ. ಬಿಜೆಪಿಯಿಂದ ಸ್ಪರ್ಧಿಸಿರುವ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಅಳಿಯ ಡಾ.ಸಿಎನ್‌ ಮಂಜುನಾಥ್‌ ವಿರುದ್ಧ ಡಿಕೆ ಸುರೇಶ್‌ ಸೋಲು ಕಂಡಿದ್ದಾರೆ. ಇದು ಡಿಕೆ ಬ್ರದರ್ಸ್ ಗೆ ಭಾರೀ ಆಘಾತ ನೀಡಿದೆ.

BREAKING: ಬೀದರ್ ನಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿ!

ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸಾಗರ್ ಖಂಡ್ರೆ ಭರ್ಜರಿಯಾಗಿ ಗೆಲುವು ದಾಖಲಿಸಿದ್ದಾರೆ. ಅವರು ಬಿಜೆಪಿಯ ಅಭ್ಯರ್ಥಿಯಾಗಿರುವ ಹಾಲಿ ಸಂಸದ, ಕೇಂದ್ರ ಸಚಿವರೂ ಆಗಿರುವ ಭಗವಂತ್ ಖೂಬಾ ವಿರುದ್ಧ ಭಾರೀ ಅಂತರದ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಹಾಲಿ ಸಂಸದ ಖೂಬಾಗೆ 27 ಹರೆಯದ ಸಾಗರ್ ಭಾರೀ ಟಕ್ಕರ್ ಕೊಟ್ಟು ಹೀನಾಯವಾಗಿ ಸೋಲಿಸಿದ್ದಾರೆ. ಸಾಗರ್ ರಾಜ್ಯದ ಕಿರಿಯ ಸಂಸದರಾಗಿ ಆಯ್ಕೆಯಾಗಿದ್ದಾರೆ.

BREAKING: ಬಾಗಲಕೋಟೆಯಲ್ಲಿ ಬಿಜೆಪಿಗೆ ಜಯ!

ಬಾಗಲಕೋಟೆಯ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪಿಸಿ ಗದ್ದಿಗೌಡರ್ ಗೆಲುವು ದಾಖಲಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿಯಾದ ಸಂಯುಕ್ತಾ ಪಾಟೀಲ್ ವಿರುದ್ಧ ಭಾರೀ ಅಂತರದ ಮತಗಳಿಂದ ವಿಜಯ ಸಾಧಿಸಿದ್ದಾರೆ.

BREAKING: ಮಾಜಿ ಸಿಎಂ ಬೊಮ್ಮಾಯಿ ಗೆಲುವು!

ಹಾವೇರಿ ಲೋಕಸಭಾ ಚುನಾವಣೆಯಲ್ಲಿ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಆನಂದ ಗಡ್ಡದೇವರ ಮಠ ವಿರುದ್ಧ ಜಯ ಸಾಧಿಸಿದ್ದಾರೆ. 

ಕೋಟಾ ಶ್ರೀನಿವಾಸ್ ಪೂಜಾರಿಗೆ ಗೆಲುವು!

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಕೋಟಾ ಶ್ರೀನಿವಾಸ್ ಪೂಜಾರಿಗೆ ಭರ್ಜರಿ ಗೆಲುವಾಗಿದೆ. ಅವರು ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಡಾ. ಕೆ.ಸುಧಾರಕರ್‌ಗೆ ಭರ್ಜರಿ ಗೆಲುವು

ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಡಾ. ಕೆ. ಸುಧಾರಕರ್‌ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ರಕ್ಷಾ ರಾಮಯ್ಯ ವಿರುದ್ಧ ಸುಧಾಕರ್‌ ಭರ್ಜರಿ ಗೆಲುವು ದಾಖಲಿಸಿದ್ದಾರೆ.

BREAKING: ಗೋವಿಂದ ಕಾರಜೋಳಗೆ ಗೆಲುವು!

ಚಿತ್ರದುರ್ಗ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಗೋವಿಂದ್ ಕಾರಜೋಳ ಅವರು ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಅವರು ಕಾಂಗ್ರೆಸ್ ಅಭ್ಯರ್ಥಿ ಚಂದ್ರಪ್ಪ ಅವರ ವಿರುದ್ಧ ವಿಜಯ ಪತಾಕೆ ಹಾರಿಸಿದ್ದಾರೆ.

Breaking: ವಿ.ಸೋಮಣ್ಣನಿಗೆ ಭರ್ಜರಿ ಗೆಲುವು

ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವಿ.ಸೋಮಣ್ಣ ಭರ್ಜರಿಯಾಗಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಮುದ್ದಹನುಮೇಗೌಡರು ಸೋಲು ಕಂಡಿದ್ದಾರೆ. ಕಳೆದ ವಿಧಾನಸಭೆಯಲ್ಲಿ ವರುಣ, ಚಾಮರಾಜನಗರ ಕ್ಷೇತ್ರಗಳಲ್ಲಿ ಕಣಕ್ಕಿಳಿದಿದ್ದ ಸೋಮಣ್ಣ ಸೋಲುಂಡಿದ್ದರು. ಆದರೂ ಮತ್ತೆ ತುಮಕೂರಿನಿಂದ ಕಣಕ್ಕಿಳಿಸಿ ಅದೃಷ್ಟ ಪರೀಕ್ಷೆ ಮಾಡಲಾಗಿತ್ತು. ಬಿಜೆಪಿಗೆ ಹೋಗಿ ಮತ್ತೆ ಕಾಂಗ್ರೆಸ್‌ಗೆ ಬಂದಿದ್ದ ಮುದ್ದಹನುಮೇಗೌಡರು ಟಿಕೆಟ್ ಪಡೆದಿದ್ದರು. ಆದರೆ ಸೋಲು ಅನುಭವಿಸಿದ್ದಾರೆ.

BREAKING: ಅಂಜಲಿ ನಿಂಬಾಳ್ಕರ್ ಸೋಲು!

ಉತ್ತರ ಕನ್ನಡದಲ್ಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳ್ಕರ್ ಹೀನಾಯ ಸೋಲು ಅನುಭವಿಸಿದ್ದಾರೆ. ಅಂಜಲಿ 2,72,936 ಮತಗಳು ಪಡೆದಿದ್ದು, ಅವರು ಸುಮಾರು 2,22,252 ಮತಗಳ ಅಂತರದಿಂದ ಸೋತಿದ್ದಾರೆ. ಇನ್ನು ಗೆದ್ದ ಬಿಜೆಪಿ ಅಭ್ಯರ್ಥಿ ಕಾಗೇರಿ ಅವರು 4,95,188 ಮತ ಪಡೆದಿದ್ದಾರೆ.

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವು

ಬೆಳಗಾವಿಯಲ್ಲಿ ಜಗದೀಶ್ ಶೆಟ್ಟರ್ ಗೆಲುವು ಕಂಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದ ಜಗದೀಶ್ ಶೆಟ್ಟರ್, ಮೊದಲ ಬಾರಿ ಸಂಸತ್ ಪ್ರವೇಶಿಸಿದ್ದಾರೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅವರು ಆರಂಭದಿಂದಲೇ ಮುನ್ನಡೆ ಕಂಡಿದ್ದರು.

BIG BREAKING: ಹೆಚ್‌ಡಿ ಕುಮಾರಸ್ವಾಮಿಗೆ ಭರ್ಜರಿ ಗೆಲುವು

ಮಂಡ್ಯ ಜೆಡಿಎಸ್‌ನ ಭದ್ರಕೋಟೆ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ಮಾಜಿ ಸಿಎಂ ಕುಮಾರಸ್ವಾಮಿ ದಾಖಲೆಯ ಅಂತರದಿಂದ ಗೆದ್ದಿದ್ದಾರೆ. ಕಾಂಗ್ರೆಸ್‌ ಅಭ್ಯರ್ಥಿ ಸ್ಟಾರ್‌ ಚಂದ್ರು ಸೋಲುಂಡಿದ್ದಾರೆ.

BREAKING: ಸುನಿಲ್ ಬೋಸ್ ಗೆ ಭರ್ಜರಿ ಗೆಲುವು!

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸುನಿಲ್ ಬೋಸ್ ಭರ್ಜರಿ ಗೆಲುವು ಸಾಧಿಸಿದ್ದಾರೆ. ಬಿಜೆಪಿ ಅಭ್ಯರ್ಥಿ ಬಾಲರಾಜು ಸೋಲೊಪ್ಪಿಕೊಂಡಿದ್ದಾರೆ.

BIG BREAKING: ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಜಯಭೇರಿ

ಬೆಳಗಾವಿಯಲ್ಲಿ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಜಯ ಗಳಿಸಿದ್ದಾರೆ. ಕಾಂಗ್ರೆಸ್‌ನ ಮೃಣಾಲ್‌ ಹೆಬ್ಬಾಳ್ಕರ್‌ ವಿರುದ್ಧ ಗೆಲುವು ಕಂಡಿದ್ದಾರೆ.

BREAKING: ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲುವು!

ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಇ.ತುಕಾರಾಂ ಗೆಲುವು ಸಾಧಿಸಿದ್ದಾರೆ. ಇತ್ತ ಬಿಜೆಪಿ ಅಭ್ಯರ್ಥಿ ಬಿ.ಶ್ರೀರಾಮುಲು ಸೋಲು ಅನುಭವಿಸಿದ್ದಾರೆ.

BIG BREAKING: ಪ್ರಜ್ವಲ್‌ ರೇವಣ್ಣಗೆ ಸೋಲು

ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನ ಪ್ರಜ್ವಲ್‌ ರೇವಣ್ಣ ಸೋಲು ಕಂಡಿದ್ದಾರೆ. ಕಾಂಗ್ರೆಸ್‌ನ ಶ್ರೇಯಸ್‌ ಪಟೇಲ್‌ ಗೆದ್ದಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ಜೈಲು ಸೇರಿರುವ ಪ್ರಜ್ವಲ್‌, ಭಾರೀ ಮುಖಭಂಗ ಅನುಭವಿಸಿದ್ದಾರೆ. 2 ದಶಕದ ನಂತರ ಹಾಸನದಲ್ಲಿ ಕಾಂಗ್ರೆಸ್ ಖಾತೆ ತೆರೆದಿದೆ. ಚುನಾವಣೆ ಮೂರು ದಿನ ಇರುವಾಗ ಪೆನ್‌ಡ್ರೈವ್‌ಗಳು ಪತ್ತೆಯಾಗಿದ್ದವು. ಶ್ರೇಯಸ್ ಪಟೇಲ್ ಕಳೆದ ವಿಧಾನಸಭೆಯಲ್ಲಿ ಕೆಲವೇ ಮತಗಳ ಅಂತರದಲ್ಲಿ ಹೊಳೆನರಸೀಪುರದಲ್ಲಿ ರೇವಣ್ಣ ವಿರುದ್ಧ ಸೋಲು ಕಂಡು ಗಮನ ಸೆಳೆದಿದ್ದರು.

Keep an eye on the website for real-time updates as the results are announced! 🗳️🇮🇳